Magazines

ಜೀವನ ಶಿಕ್ಷಣ ಪತ್ರಿಕೆ
ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ (1856) ಮಠ ಪತ್ರಿಕೆ ಎಂದು ಪ್ರಾರಂಭವಾದ ಮಾಸ ಪತ್ರಿಕೆ ಈವರೆಗೂ ಪ್ರಕಟಿಸಲ್ಪಡುತ್ತಿದೆ. ಸುಮಾರು 149 ವರ್ಷಗಳ ಹಿಂದೆ ಕನ್ನಡದ ಶಕ ಪುರುಷ ಡೆಪ್ಯುಟಿ ಚನ್ನಬಸಪ್ಪನವರು ಶಿಕ್ಷಕರಿಗೆ ಶಿಕ್ಷಣದ ವಿಷಯವಾಗಿ ತಿಳುವಳಿಕೆ ನೀಡುವ ಶಿಕ್ಷಣ ಸಾಹಿತ್ಯವನ್ನು ನೀಡಲು ಅಪೇಕ್ಷಿಸಿದರು. ಆರಂಭದಲ್ಲಿ ಮಠಗಳಲ್ಲಿಯೇ ಪಾಠ ಶಾಲೆಗಳು ನಡೆಯುತ್ತಿದ್ದರಿಂದ ವಿಶೇಷವಾಗಿ ಈ ಪತ್ರಿಕೆಯನ್ನು ಕನ್ನಡ-ಕನ್ನಡಿಗ-ಕರ್ನಾಟಕ ಅಭ್ಯುದಯಕ್ಕಾಗಿ ಮುಖವಾಣಿಯಾಗಿ ಬಳಸುವ ದೃಷ್ಠಿಯಿಂದ "ಮಠಪತ್ರಿಕೆ" (1856) ಎಂಬ ಹೆಸರಿನಲ್ಲಿ ಆರಂಭಿಸಿದರು.